Belgaum belongs to Maharastra? Think again.
ಬೆಳಗಾವಿಯೇ ಆಗಲಿ, ಕೇರಳಕ್ಕೆ ಸೇರಿರುವ ಕಾಸರಗೋಡೇ ಆಗಲಿ, ತಮಿಳುನಾಡು, ಆಂಧ್ರಕ್ಕೆ ಸೇರಿಹೋಗಿರುವ ಕನ್ನಡ ಮಾತನಾಡುವ ಪ್ರದೇಶವೇ ಆಗಲಿ ಇವೆಲ್ಲವೂ ನಮ್ಮ ಕರ್ನಾಟಕದ ಅವಿಭಾಜ್ಯ ಪ್ರದೇಶಗಳೇ !
ಈಗ ಬೆಳಗಾವಿ, ಕಾರವಾರ, ಬೀದರ್ ಪ್ರದೇಶಗಳಲ್ಲಿರುವ ೨೭೪ ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಬಾಯಿಹರಿದುಕೊಳ್ಳುವ ಎಮ್ ಇ ಎಸ್ ಗೆ ಆಗಲಿ ಶಿವಸೇನೆಗೆ ಆಗಲಿ ನಾವು ತಿಳಿಸಬೇಕಾದದ್ದು ಇಷ್ಟೆ : " ಬರೀ, ಬೆಳಗಾವಿ ಅಲ್ಲೋ, ಪೂರಾ ಮಹಾರಾಷ್ಟ್ರಾ ನಮ್ಮದೈತಿ..." ಅಲ್ಲಿರುವ ಎಲ್ಲೋರಾದ ದೇವಾಲಯಗಳಾಗಲೀ, ಮುಂಬೈ ಬಳಿಯ ಎಲಿಫೆಂಟಾ, ಕನ್ನ್ಹೇರಿ ಗುಹಾಂತರ ದೇವಾಲಯಗಳಲಿ, ಕೊಲ್ಲ್ಹಾಪುರದ ಮಹಾಲಕ್ಷ್ಮಿ ದೇವಾಲಯವಾಗಲೀ, ಪಂಢರಾಪುರದ ವಿಠಲನ ದೇವಸ್ಥಾನವಾಗಲೀ ನಮ್ಮ ರಾಷ್ಟ್ರಕೂಟ ದೊರೆಗಳು ಕಟ್ಟಿಸಿದ್ದು, ಅಭಿವೃದ್ಧಿಪಡಿಸಿದ್ದು...ಒಮ್ಮೆ ಕೊಲ್ಲ್ಹಾಪುರದಾಗ ಕ್ಷಾಮ ಬಂದಾಗ, ಮಹಾಲಕ್ಷ್ಮಿಗೆ ತನ್ನ ಕೈಬೆರಳನ್ನು ಕತ್ತರಿಸಿ ಕ್ಷಾಮವನ್ನು ಹೋಗಲಾಡಿಸು ಎಂದು ಕೇಳಿಕೊಂಡಿದ್ದ ರಾಷ್ಟ್ರಕೂಟ ರಾಜ ಅಮೋಘವರ್ಷ ! ಈ ಐತಿಹಾಸಿಕ ಈಗಲೂ ಕೊಲ್ಲ್ಹಾಪುರ ಪ್ರದೇಶದ ಅನೇಕ ಶಾಸನಗಳಿಂದ ತಿಳಿದುಬರುತ್ತದೆ...ಮಹಾರಾಷ್ಟ್ರದ ತುಳಜಾಪುರದಲ್ಲಿರುವ ತುಳಜಾ ಭವಾನಿ ಚಾಳುಕ್ಯರ ಕುಲದೇವತೆಯಾಗಿದ್ದಳು...ಅವರೇ ಆ ದೇವಸ್ಥಾನವನ್ನು ಅಭಿವೃದ್ಧಿಪಡಿಸಿದ್ದು...ಈಗಲೂ ತುಳಜಾ ಭವಾನಿಗೆ, ಪಂಢರಾಪುರದ ವಿಠಲನಿಗೆ, ಕೊಲ್ಲ್ಹಾಪುರದ ಮಹಾಲಕ್ಷ್ಮಿಗೆ ನಡೆದುಕೊಳ್ಳುವ ಲಕ್ಷಾಂತರ ಕನ್ನಡ ಮನೆತನಗಳು ಕರ್ನಾಟಕ-ಮಹಾರಾಷ್ಟ್ರದಾದ್ಯಂತ ಚದುರಿಹೋಗಿದೆ. 'ಸರ್ವ ಭೂಮಂಡಲದಿಂ ಅಮೋಘಂ ಮಧುರ ಕನ್ನಡ ನುಡಿಯಂ ಪೇಳ್ವ ಜನಗಳಿರ್ಪ ಗೋದಾವರಿಯಿಂದ ಕಾವೇರಿವರೆಗಿರ್ಪ ದೇಶಮಂ....’ ಎಂಬಂತಹ ಸಾಲುಗಳು ರಾಷ್ಟ್ರಕೂಟ ದೊರೆಯಾದ ಅಮೋಘವರ್ಷ ನೃಪತುಂಗನ ಕೃತಿಯಾದ ಕವಿರಾಜಮಾರ್ಗದಲ್ಲಿದೆ...ಇದರಿಂದಲೇ ತಿಳಿಯಬಹುದು ನಮ್ಮ ಕನ್ನಡ ಮಾತಾನಾಡುವ ಪ್ರದೇಶ ಎಷ್ಟು ಉದ್ದಗಲಕ್ಕೂ ಚಾಚಿತ್ತು ಎಂದು...ಗೋದಾವರಿ ಇರುವ ಮಹಾರಾಷ್ಟ್ರದ ತುತ್ತ ತುದಿಯಿಂದ ಹಿಡಿದು ಕಾವೇರಿಯ ಸೀಮೆಯವರೆಗೆ ವಿಶಾಲ ಕನ್ನಡ ನಾಡು ಇತ್ತು !
ಇಡಿ ಮಹಾರಾಷ್ಟ್ರದ ಉದ್ದಗಲಕ್ಕೂ ಚಾಚಿರುವ ಊರುಗಳ ಹೆಸರಿನಲ್ಲಿ ಕನ್ನಡತನವನ್ನು ನೀವು ಈಗಲೂ ಕಾಣಬಹುದು, ಮರಾಠಿ ಭಾಷೆಯ ಅನೇಕ ಪದಗಳಲ್ಲಿ ಕನ್ನಡ ಈಗಲೂ ಉಳಿದುಕೊಂಡಿದೆ...ಉದಾ: ಮುಂಬೈ ಬಳಿಯ ಬೋರಿವಿಲ್ಲಿ ಕನ್ನಡದ ಬೋರಿವಳ್ಳಿಯಾಗಿದೆ...ಕೊಲ್ಲ್ಹಾಪುರ, ಸೊಲ್ಲಾಪುರ ಕನ್ನಡ ಹೆಸರುಗಳು...ಮುಂಬೈ ಬಳಿಯ ಕನ್ನ್ಹೇರಿ ಗುಹೆಗಳ ನೈಜ ಹೆಸರು ಕನ್ನಗಿರಿ ಎಂದು...ಹೀಗೆ ಎಷ್ಟೋ ಕನ್ನಡ ಪ್ರದೇಶಗಳು ಮರಾಠಿಯ ನಂತರದ ಪ್ರಭಾವದಿಂದ ತುಸು ಬದಲಾಯಿತಷ್ಟೆ.. ಮರಾಠಿ ಉದಯಿಸಿದ್ದು ೧೪-೧೫ನೇ ಶತಮಾನದಲ್ಲಿ ಕನ್ನಡದ ಮೇಲೆ ಹಿಂದಿ, ಸಂಸ್ಕೃತದ ಪ್ರಭಾವದಿಂದ..ಉತ್ತರ ಭಾರತೀಯರ ವಲಸೆಯಿಂದ..ಅದಕ್ಕಿಂತಲೂ ಮುಂಚಿತವಾಗಿ ಅಲ್ಲಿದ್ದಿದ್ದು ಕನ್ನಡಿಗರು, ಕನ್ನಡವೇ ! ಅಷ್ಟೇ ಏಕೆ ಬ್ರಿಟಿಷ್ ಕಾಲದಲ್ಲಿ ಮುಂಬೈ ಯಲ್ಲಿ ಬ್ರಿಟಿಷರು ಹೊರಡಿಸಿದ ಮೊದಲ ಗೆಜ಼ೆಟಿಯರ್ ಕನ್ನಡದಲ್ಲೇ ಇತ್ತು ಎನ್ನುವುದಕ್ಕೆ ಸಾಕ್ಷಿಗಳಿವೆ !
ಇಷೆಲ್ಲಾ ಐತಿಹಾಸಿಕ ದಾಖಲೆಗಲಿದ್ದರೂ, ನಮ್ಮ ಸಂಸ್ಕೃತಿಯನ್ನು, ಮರಾಠಿ ಭಾಷೆಯನ್ನು, ನಮ್ಮ ಶಿಲ್ಪಕಲೆಯನ್ನು, ದೇವಾಲಯಗಳನ್ನು, ಊರುಗಳನ್ನು ಮಹಾರಾಷ್ಟ್ರದ ತುಂಬ ಕನ್ನಡಿಗರು ನೀಡಿದ್ದರೂ ಈಗಿನ ಮರಾಠಿಗರಾದ ಎಂ ಇ ಎಸ್ ನಂತವರು ಬೆಳಗಾವಿ ಬೇಕು ಅದು ಇದು ಬೇಕು ಎನ್ನುತ್ತಾರೆ..ಅಸಲಿಗೆ ನೋಡಿದರೆ ನಾವು ಕನ್ನಡಿಗರು ಪೂರಾ ಮಹಾರಾಷ್ಟ್ರಾನೇ ಕೇಳಬೇಕಾಗುತ್ತದೆ..ಆದರೆ ನಾವು ಕೇಳುವುದಿಲ್ಲ...ನಮಗೆ ಈಗಿನ ಕನ್ನಡ ಭಾಷಿಕರು ಹೆಚ್ಚಾಗಿ ಇರುವಂತಹ ಸೊಲ್ಲಾಪುರ, ಅಕ್ಕಲಕೋಟ, ಕೊಲ್ಲ್ಹಾಪುರ, ಸಾಂಗ್ಲಿ, ಮೀರಜ್ ಪ್ರದೇಶಗಳನ್ನು ನೀಡಿ ಅಷ್ಟೆ....ಬೆಳಗಾವಿಯನ್ನು ಮಾತ್ರ ಕೇಳಬೇಡಿ..
ಅಸಲಿಗೆ ಬೆಳಗಾವಿಯ ಹಳೆಯ ಹೇಸರು 'ವೇಣುಗ್ರಾಮ’ ಎಂದು...ನಂತರ ವೇಣಗಾವ..ವೆಲಗಾವ..ಬೆಳಗಾವ-ಗಾವಿ ಆಗಿದೆ...'ಗಾವ’ 'ಗಾವಿ’ ಪದಗಳ ಮೂಲ ಪದ 'ಗ್ರಾಮ’...ಮರಾಠಿಯ ನಂತರದ ಪ್ರಭಾವದಿಂದ 'ಗ್ರಾಮ' ಇರುವ ಕಡೆಯಲೆಲ್ಲಾ 'ಗಾವ' ಗಳು ಬಂದವು ಅಷ್ಟೆ. ಮರಾಠಿಗರು ಶಿವಾಜಿ ಕಾಲದಲ್ಲಿ ಬೆಳಗಾವಿಯಲ್ಲಿ ಬಂದು ನೆಲೆಸಿ, ತಮ್ಮ ಸಂಖ್ಯೆ ಬೆಳೆಸಿಕೊಂಡು ಈಗ ತಮಗೇ ಅದು ಬೇಕೆಂದು, ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೊಬ್ಬೆ ಹೊಡೆದರೆ ಇಲ್ಲಿ ಹೆದರುವರು ಯಾರಿಲ್ಲ...ಬೆಳಗಾವಿ ಕರ್ನಾಟಕದ್ದು !!





everyone here knows kannada.......even tina......

Bookmarks